ನಂಬಿ ಕೆಟ್ಟವರಿಲ್ಲ!
ಯಾವುದೀ ರಾಗ?
ವಸಂತ ಮಾತ್ರವಲ್ಲ, ವರ್ಷವಿಡೀ
ಕೇಳಿದ್ದ ರಾಗ ಚಿರಪರಿಚಿತ.
ಹೆಸರು ಮಾತ್ರ ಗೊತ್ತಿಲ್ಲ.
ರಾಗದ ಚೆಲುವು ನನಗಾಗಿ ಅಲ್ಲ..ವೆಂಬ ಸತ್ಯ ಗೊತ್ತಿದ್ದರೂ
ಚಂಚಲಗೊಳ್ಳುವ ಮನಸು.
ಹಾಡುತ್ತ ಹಾಡುತ್ತ..
ಮೋಡಿ ಮಾಡುವ ರಾಗಕ್ಕೆ ಮನ ಸೋಲದವರ‍್ಯಾರು?
ಹಳೆಯ ರಾಗವಾದರೂ ಹೊಸತರಂತೆ ಹಾಡುವ ಕಲೆ
ಅದಕ್ಕೆ ಗೊತ್ತು.
ಹೇಳಿದ್ದನ್ನೇ ಹೇಳುತ್ತ..
ಹಾಡಿದ್ದನ್ನೇ ಹಾಡುತ್ತಿದ್ದರೂ ಮನ ಸೋತಿದೆ.
ಮಧುರ ಕಂಠದಲ್ಲಿದೆ
ಹಳೆಯ ದಿನಗಳ ಮೆಲುಕು.
ರಾಗದಲ್ಲಿ ಎದೆಹಾಡು.
ಭಾವದಲ್ಲಿ ಮಾತ್ರ ಏನೋ ಅದಲು-ಬದಲು.
ಅದು ಗಂಡು ಹಕ್ಕಿ.
ಹಾಡಿಗೆ, ರಾಗಕ್ಕೆ, ಬದಲಾವಣೆಗೆ
ಹೇಳಿಕೊಡಬೇಕೇ?
ದಿಕ್ಕು ತಪ್ಪಿಸುವ ಹಕ್ಕಿ.
Monday, 21 September 2009
Subscribe to:
Post Comments (Atom)
ಸುಮ್ನೀ, ಗಟ್ಟಿ ಕವಿತೆ- ಗಟ್ಟಿ ಭಾವ ಕೂಡಾ..
ReplyDelete**ಅದು ಗಂಡು ಹಕ್ಕಿ.
ಹಾಡಿಗೆ, ರಾಗಕ್ಕೆ, ಬದಲಾವಣೆಗೆ
ಹೇಳಿಕೊಡಬೇಕೇ?
ದಿಕ್ಕು ತಪ್ಪಿಸುವ ಹಕ್ಕಿ**
ಹ್ಮ್...!
ಅಬ್ಬಾ! ಏನೋ ವಿಚಿತ್ರ ಶಕ್ತಿಯುತ ಭಾವ..ಕಡೆಯ ಚರಣ ಅದ್ಭುತವಾಗಿದೆ..
ReplyDeleteಕೆಲವು ಹೆಣ್ಣು ಹಕ್ಕಿ ಕೂಡ ಹಾಗೇನೇ ಮೇಡಮ್... ಬಹುಶಃ ನೀವು ಗಮನಿಸಿರ್ಲಿಕ್ಕಿಲ್ಲ..:)
ReplyDeleteVery nice and true lines :)
ReplyDelete