Saturday 22 January 2011

ಅವಳು ರಾಧೆ...

ಮೀಸೆ ಮೂಡುವ ಮುನ್ನವೇ
ಮನಕದ್ದ ಚೋರ ಹತ್ತಾರು ಗೋಪಿಕೆಯರ
ನಲ್ಲ ಎಂದರೂ ಅಚಲ ವಿಶ್ವಾಸ ಅವಳದ್ದು.

ಹದಿನಾರು ಸಾವಿರ ಹೆಂಡಿರ
ಸೆರಗಿನಡಿ ಬೆಚ್ಚಗಿದ್ದ ಆ ಜೀವವೂ
ಈ ವಿರಹಕ್ಕೆ, ಕಾಯುವಿಕೆಗೆ ಸೋತಿತ್ತು.

ಅವನ ಪಾದದ ಮೇಲೆ ಅವಳ ಕಂಬನಿ
ಅವನೆದೆಯಲ್ಲಿ ಅವಳ ಚಿತ್ರ
ಅವಳ ಬದುಕಲ್ಲಿ ಅವನಿಲ್ಲ ಎಂದವರು ಯಾರು?

ಅಷ್ಟಕ್ಕೂಅವಳಿಗೆ ಅವನು ಬೇಕಿಲ್ಲ
ನೆನಪೊಂದೇ ಸಾಕು
ಜೀವನವಿಡೀ ಬೇಯಲು.

3 comments:

  1. radhe bere alla..shyaama bere alla..eradu onde bhaava..uttama kavana..dhanyavadagalu.

    ananth

    ReplyDelete
  2. ಕೊನೆಯ ಸಾಲುಗಳು ಎಷ್ಟು ಅರ್ಥ ಗರ್ಭಿತ
    ಇಂಥಹುದೇ ವಿರಹ ಬಹುಶ: ಊರ್ಮಿಳೆಗೂ ಕಾಡಿರಬೇಕು ಅಲ್ಲವೇ?
    ಪತಿಯ ನೆನಪಿನಲ್ಲೇ ೧೪ ವರ್ಷಗಳನ್ನು ಕಳೆದ ಊರ್ಮಿಳೆಗೂ, ಪತಿಯಿದ್ದೂ
    ಅವನಿಗಾಗಿ ಚಡಪಡಿಸುವ ರಾಧೆಗೂ ಎಷ್ಟೊಂದು ಸಾಮ್ಯ ಅಲ್ಲವೇ?
    ತುಂಬಾ ಸುಂದರ ಭಾವನೆಗಳ ಕವಿತೆ

    ReplyDelete