ಮೈಕ್ರೊಸಾಫ್ಟ್ ಧೋನಿ!
---------------
ಅಮ್ಮಾ...ನೀ ನನ್ನ ದೇವರು
ಮಕ್ಕಳಿಗೆ ಅಮ್ಮನ ಮಾತೆಂದರೆ ವೇದವಾಕ್ಯ. ಅದು ಸರಿಯೋ, ತಪ್ಪೋ, ಸುಳ್ಳೋ, ಸತ್ಯವೋ ಎಂಬ ಅರಿವು ಅವರಿಗೆ ಇರುವುದಿಲ್ಲ. ಒಟ್ಟಿನಲ್ಲಿ ಅಮ್ಮ ಏನಾದರೂ ಹೇಳಿದಳೆಂದರೆ, ಅದನ್ನು ಪಾಲಿಸಬೇಕು ಅಷ್ಟೇ.
ಕೆಲವು ಮಕ್ಕಳು ಇದಕ್ಕೆ ವ್ಯತಿರಿಕ್ತರಾಗಿರ‍್ತಾರೆ ಅದು ಬೇರೆ ವಿಚಾರ. ಆದರೆ, ಸಾಮಾನ್ಯವಾಗಿ ಅಮ್ಮ ಏನಾದರೂ ಹೇಳಿದಳೆಂದರೆ ಅದು ಪರಮ ಸತ್ಯವೆಂದೇ ಮಕ್ಕಳು ತಿಳಿಯುತ್ತಾರೆ. ಅಲ್ವೇ?
ಅಮ್ಮನ ಮಾತನ್ನು ಮೀರಲಾಗದೇ ಮಕ್ಕಳು ವರ್ತಿಸುವ ಬಗ್ಗೆ ಇಲ್ಲೆರಡು ಸನ್ನಿವೇಶಗಳಿವೆ. ಅದನ್ನು ಓದಿದ ಬಳಿಕ ಮಕ್ಕಳಿಗೆ ಹೇಗೆ ವಿಷಯ ಮನದಟ್ಟು ಮಾಡಿಕೊಡಬೇಕೆಂದು ನೀವೇ ಯೋಚಿಸಿ.
ಘಟನೆ ಒಂದು
ಒಮ್ಮೆ ಐದು ವರ್ಷದ ಪುಟ್ಟ ಮಗು ಶ್ರೇಯಾಳಿಗೆ ಯಾವುದೋ ಆರೋಗ್ಯ ಸಮಸ್ಯೆ ಉಂಟಾಗಿತ್ತು. ವೈದ್ಯರ ಶಿಫಾರಸು ಮೇರೆಗೆ ಸಿಟಿ ಸ್ಕ್ಯಾನ್ ಮಾಡಿಸಬೇಕೆಂದು ಅವಳ ಅಮ್ಮ ಕರೆದುಕೊಂಡು ಹೋಗಿದ್ದರು. ಸ್ಕ್ಯಾನ್ ಮಾಡಲು ವೈದ್ಯರು ಬಂದರು. ಆದರೆ, ಶ್ರೇಯಾ ಇನ್ನೂ ಏನೇನೋ ಆಟವಾಡುವ ವಿಚಾರದಲ್ಲೇ ಇದ್ದಳು.
ಆಗ ಅವಳ ಅಮ್ಮ ‘ಸುಮ್ಮನಿರು. ಸ್ಕ್ಯಾನ್ ಮಾಡಿಸುವಾಗ ಏನೆಂದರೆ ಏನೂ ಚಲನೆ ಮಾಡಬಾರದು. ಸುಮ್ಮನೆ ಮಲಗಿಕೊ’ಎಂದರು. ಅವಳಿಗೆ ಹೆಚ್ಚು ಎಚ್ಚರ ಮೂಡಿಸಬೇಕೆಂದು ಪದೇ ಪದೇ ‘ಹಾಗೇಯೇ ಮಲಗು. ತಲೆ ಅಲ್ಲಾಡಿಸಬೇಡ. ಬೆರಳುಗಳನ್ನು ಸಹ ಅಲ್ಲಾಡಿಸಬೇಡ’ಎಂದು ಹೇಳುತ್ತಾ ಉಳಿದರು.
ಅಲ್ಲಿ ಸೈಲೆನ್ಸ್ ಇತ್ತು ಎಷ್ಟೆಂದರೆ, ಉಸಿರಾಡಿಸುವುದೂ ಸಹ ಕೇಳುವಷ್ಟು. ಮಶಿನ್ ಸದ್ದು ಬಿಟ್ಟು ಬೇರೆ ಯಾವ ಸದ್ದೂ ಅಲ್ಲಿರಲಿಲ್ಲ. ಆಗ ಕೆಲವು ಸೆಕೆಂಡ್‌ಗಳ ಕಾಲ ಸುಮ್ಮನಿದ್ದ ಶ್ರೇಯಾ, ಪಿಸುಮಾತಿನಲ್ಲಿ ಕೇಳ್ತಾಳೆ‘ಅಮ್ಮಾ ನಾನು ಉಸಿರಾಡಿಸಬಹುದಾ?’
ಘಟನೆ ಎರಡು
ಏಳು ವರ್ಷದ ಸೌಮ್ಯಾ ಯಾವುದೋ ಪುಸ್ತಕವನ್ನು ಓದುತ್ತ ಕೂತಿದ್ದಳು. ಅವಳ ಅಮ್ಮ ಏನೋ ಕೆಲಸದಲ್ಲಿ ತಲ್ಲೀನರಾಗಿದ್ದರು. ಪುಸ್ತಕ ಓದುತ್ತಿದ್ದ ಸೌಮ್ಯಾಳಿಗೆ ಯಾವುದೋ ಸಮಸ್ಯೆ ಬಂತು. ಸರಿ ಅಮ್ಮನಲ್ಲಿಗೆ ಹೋಗಿ ‘ಅಮ್ಮಾ ಎಂ.ಎಸ್ ಫುಲ್‌ಫಾರ್ಮ್ ಏನು?’ಎಂದು ಕೇಳಿದಳು.
‘ಎಂ.ಎಸ್ಸಾ? ಮೈಕ್ರೊಸಾಫ್ಟ್’ಎಂದು ಅಮ್ಮ ಉತ್ತರ ನೀಡುತ್ತಾರೆ. ಮತ್ತೆ ಹಿಂತಿರುಗಿ ತನ್ನ ಜಾಗಕ್ಕೆ ಹೋಗಿ ಓದಲು ಕುಳಿತ ಸೌಮ್ಯಾ ಜೋರಾಗಿ ಹೇಳಿಕೊಳ್ಳುತ್ತಾಳೆ‘ಮೈಕ್ರೊಸಾಫ್ಟ್ ಧೋನಿ ಇಸ್ ಅ ಫೇಮಸ್ ಕ್ರಿಕೆಟರ್.....’
Wednesday, 20 April 2011
Subscribe to:
Post Comments (Atom)
hha hha... bareda riti chennaagide....
ReplyDeletehoudu ammanE devaru.....
:) :) :) Good one Sumni!
ReplyDelete