ನಾವೆಷ್ಟು ಬೇಗ ಮೋಸ ಹೋಗುತ್ತೇವೆ?
ಆತ ಕ್ರಿಯಾಶೀಲ ಪ್ರಯೋಗಶಾಲಿ. ಹೆಸರು ಈಗಲ್ ರಾಕ್ ಜ್ಯೂನಿಯರ್ ಹೈ. ಪ್ರಯೋಗ ಮಾಡುತ್ತಲೇ ಇರುವುದು ಸ್ವಭಾವಸಿದ್ಧ ಹವ್ಯಾಸ.
ಜಂಕ್‌ಫುಡ್ ಹಾಗೂ ಕೆಲವು ರಸಾಯನಿಕಗಳ ಬಗ್ಗೆ ನಾವೆಷ್ಟು ಸೂಕ್ಷ್ಮರಾಗಿದ್ದೇವೆ ಎನ್ನುವುದನ್ನು ಆತ ಸಾಬೀತುಪಡಿಸಿದ ಆತನ ಪ್ರೊಜೆಕ್ಟ್‌ಗೆ ಪ್ರತಿಷ್ಠಿತ ಇಡಾಹೋ ಫಾಲ್ಸ್ ಸೈನ್ಸ್ ಫೇರ್‌ನಲ್ಲಿ ಮೊದಲ ಬಹುಮಾನ ಬಂತು.
ಆತನ ಪ್ರೊಜೆಕ್ಟ್ ವಿವರ ಹೀಗಿದೆ.
* ಒಂದು ರಸಾಯನಿಕವಿದೆ. ಅದರ ಹೆಸರು ಡಿಹೈಡ್ರೊಜೆನ್ ಮೊನೊಕ್ಸೈಡ್. ಅದರ ಹಾನಿಗಳು ಅಪಾರ.
* ಇದರಿಂದ ಅತಿಯಾದ ಬೆವರು ಬರುತ್ತದೆ ಮತ್ತು ವಾಕರಿಕೆಯೂ ಹೆಚ್ಚು.
* ಆಸಿಡ್ ಮಳೆಯಲ್ಲಿ ಇದರ ಅಂಶವೇ ಹೆಚ್ಚು.
* ಇದರೊಂದಿಗೆ ಇತರ ಅಂಶಗಳು ಸೇರಿದರೆ ಅನೇಕ ರೋಗಗಳೂ ಬರಬಹುದು.
* ಅಕಸ್ಮಾತ್ತಾಗಿ ಉಸಿರಿನೊಳಗೆ ಸೇರಿದರೆ ಸಾವು ಗ್ಯಾರೆಂಟಿ.
* ಭೂಸವೆತಕ್ಕೂ ಇದು ಪ್ರಮುಖ ಕಾರಣ.
* ಆಟೊಮೊಬೈಲ್‌ನ ಕಾರ್ಯಕ್ಷಮತೆ ಕುಂದಲು ಇದೇ ಕಾರಣ.
* ಕ್ಯಾನ್ಸರ್ ಗಡ್ಡೆಗಳಲ್ಲೂ ಇದು ಇರುತ್ತದೆ.
ಈಗ ಹೇಳಿ. ಈ ರಸಾಯನಿಕವನ್ನು ನಿಷೇಸುವುದೋ ಬೇಡವೋ ಎಂದು ಆತ ೫೦ ಜನರನ್ನು ಪ್ರಶ್ನಿಸಿದಾಗ ೪೩ ಮಂದಿ ನಿಷೇಸುವುದಕ್ಕೆ ಸಹಮತ ಸೂಚಿಸುತ್ತಾರೆ. ೬ ಮಂದಿ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇನ್ನುಳಿದ ಒಬ್ಬರಿಗೆ ಮಾತ್ರ ಆ ಗುಟ್ಟು ಗೊತ್ತಿರುತ್ತದೆ.
ಅಷ್ಟಕ್ಕೂ ಆ ರಸಾಯನಿಕ ಯಾವುದು ಗೊತ್ತಾ? ನೀರು. ಈ ಪ್ರೊಜೆಕ್ಟ್‌ಗೇ ಆತ ಮೊದಲ ಬಹುಮಾನ ಪಡೆದಿದ್ದು. ಅದರ ಟೈಟಲ್ ‘ನಾವೆಷ್ಟು ಬೇಗ ಮೋಸ ಹೋಗುತ್ತೇವೆ?’ಎಂದು.
Sunday 22 May 2011
Subscribe to:
Post Comments (Atom)
No comments:
Post a Comment