Thursday 23 July 2009

ಹೊಸತು

ಪ್ರತಿ ತಿಂಗಳ ಕಿಬ್ಬೊಟ್ಟೆ ನೋವಿಗೆ ಹೊಸತಾಗಿ ಕರಗು ಮಾರಾಯ
ಅಂದರೆ ಇವನಿಗೆ ಅಚ್ಚರಿ
ಹೊಸತಾಗಿ ಪ್ರೀತಿಸಲು ಸಾಧ್ಯವೇ?
ನಿನ್ನ ಪ್ರತಿ ನಗುವಿಗೆ ನಾನು ಹೊಸ ನಗೆ ಸೇರಿಸುತ್ತೀನಲ್ಲೋ
ಭ್ರಮೆ ಹುಟ್ಟಿಸುವ ಮನಸು...
ಎಲ್ಲ ನನ್ನದೆಂಬ ಧಿಮಾಕಿನ ಮನಸು...
ದ್ರೋಹ ಬಗೆಯುವ ಮನಸು..
ಕಾಲ ಬುಡ ನೋಡಿಕೋ ಎಂದರೂ ಎಚ್ಚೆತ್ತುಕೊಳ್ಳದ ಮನಸು..
ಗಳೆಲ್ಲ ಒಮ್ಮೊಮ್ಮೆ ಹೊಸದಾಗಿ ಹುಟ್ಟಿಸುವ ಅಚ್ಚರಿಯಲ್ಲೇ ಬದುಕು
ಎಂದರೂ ಇವ ನಂಬಲೊಲ್ಲ
....
ಅವನೆದುರು ತೆರೆದುಕೊಂಡು ಇವನೆದುರು ಬಿಗಿದುಕೊಳ್ಳುವ
ಜೀವಕ್ಕೆ ..ಜೀವದೊಂದಿಗಿನ ಆಟಕ್ಕೆ ಪ್ರೀತಿ ನೆಪ.
ಹೊಸತಾಗಿ ಬದುಕುವ ಹಠಕ್ಕೆ
ಹೊಸತನ್ನು ಕಾಣುವ ನೋಟಕ್ಕೆ
ನೆನಪುಗಳ ಹಂಗಿಲ್ಲ.

2 comments:

  1. ಸುಮ್ನೀ... ವೆಲ್ಕಮ್ಮು, ವೆಲ್ಕಮ್ಮು.. :-) ಇನ್ನು ನಿನ್ನ ಕವಿತೆ, ಬರಹ ಎಲ್ಲವನ್ನೂ ಇಲ್ಲಿ ಓದುವ ಖುಷಿ ನನ್ನದು!

    ‘ಹೊಸತಾಗಿ ಬದುಕುವ ಹಠಕ್ಕೆ
    ಹೊಸತನ್ನು ಕಾಣುವ ನೋಟಕ್ಕೆ
    ನೆನಪುಗಳ ಹಂಗಿಲ್ಲ’
    ಎಷ್ಟು ಚಂದದ ಸಾಲುಗಳು..
    ಸುಂದರೀ, ತುಂಬ ಚೆನ್ನಾಗಿ ಪೋಣಿಸಿದ್ದಿ ಶಬ್ದಗಳನ್ನು..!

    ReplyDelete
  2. ತುಂಬಾ ಚೆಂದದ ಸಾಲುಗಳಿವೆ ನಿಮ್ಮ ಬ್ಲಾಗಲ್ಲಿ
    ಬರೆಯುತ್ತಿರಿ
    ಸ್ವರ್ಣ

    ReplyDelete