ಮೀಸೆ ಮೂಡುವ ಮುನ್ನವೇ
ಮನಕದ್ದ ಚೋರ ಹತ್ತಾರು ಗೋಪಿಕೆಯರ
ನಲ್ಲ ಎಂದರೂ ಅಚಲ ವಿಶ್ವಾಸ ಅವಳದ್ದು.
ಹದಿನಾರು ಸಾವಿರ ಹೆಂಡಿರ
ಸೆರಗಿನಡಿ ಬೆಚ್ಚಗಿದ್ದ ಆ ಜೀವವೂ
ಈ ವಿರಹಕ್ಕೆ, ಕಾಯುವಿಕೆಗೆ ಸೋತಿತ್ತು.
ಅವನ ಪಾದದ ಮೇಲೆ ಅವಳ ಕಂಬನಿ
ಅವನೆದೆಯಲ್ಲಿ ಅವಳ ಚಿತ್ರ
ಅವಳ ಬದುಕಲ್ಲಿ ಅವನಿಲ್ಲ ಎಂದವರು ಯಾರು?
ಅಷ್ಟಕ್ಕೂಅವಳಿಗೆ ಅವನು ಬೇಕಿಲ್ಲ
ನೆನಪೊಂದೇ ಸಾಕು
ಜೀವನವಿಡೀ ಬೇಯಲು.
Saturday, 22 January 2011
Subscribe to:
Post Comments (Atom)
radhe bere alla..shyaama bere alla..eradu onde bhaava..uttama kavana..dhanyavadagalu.
ReplyDeleteananth
chennaagide... hige bareyuttaa iri...
ReplyDeleteಕೊನೆಯ ಸಾಲುಗಳು ಎಷ್ಟು ಅರ್ಥ ಗರ್ಭಿತ
ReplyDeleteಇಂಥಹುದೇ ವಿರಹ ಬಹುಶ: ಊರ್ಮಿಳೆಗೂ ಕಾಡಿರಬೇಕು ಅಲ್ಲವೇ?
ಪತಿಯ ನೆನಪಿನಲ್ಲೇ ೧೪ ವರ್ಷಗಳನ್ನು ಕಳೆದ ಊರ್ಮಿಳೆಗೂ, ಪತಿಯಿದ್ದೂ
ಅವನಿಗಾಗಿ ಚಡಪಡಿಸುವ ರಾಧೆಗೂ ಎಷ್ಟೊಂದು ಸಾಮ್ಯ ಅಲ್ಲವೇ?
ತುಂಬಾ ಸುಂದರ ಭಾವನೆಗಳ ಕವಿತೆ