ನಾವೆಷ್ಟು ಬೇಗ ಮೋಸ ಹೋಗುತ್ತೇವೆ?
ಆತ ಕ್ರಿಯಾಶೀಲ ಪ್ರಯೋಗಶಾಲಿ. ಹೆಸರು ಈಗಲ್ ರಾಕ್ ಜ್ಯೂನಿಯರ್ ಹೈ. ಪ್ರಯೋಗ ಮಾಡುತ್ತಲೇ ಇರುವುದು ಸ್ವಭಾವಸಿದ್ಧ ಹವ್ಯಾಸ.
ಜಂಕ್‌ಫುಡ್ ಹಾಗೂ ಕೆಲವು ರಸಾಯನಿಕಗಳ ಬಗ್ಗೆ ನಾವೆಷ್ಟು ಸೂಕ್ಷ್ಮರಾಗಿದ್ದೇವೆ ಎನ್ನುವುದನ್ನು ಆತ ಸಾಬೀತುಪಡಿಸಿದ ಆತನ ಪ್ರೊಜೆಕ್ಟ್‌ಗೆ ಪ್ರತಿಷ್ಠಿತ ಇಡಾಹೋ ಫಾಲ್ಸ್ ಸೈನ್ಸ್ ಫೇರ್‌ನಲ್ಲಿ ಮೊದಲ ಬಹುಮಾನ ಬಂತು.
ಆತನ ಪ್ರೊಜೆಕ್ಟ್ ವಿವರ ಹೀಗಿದೆ.
* ಒಂದು ರಸಾಯನಿಕವಿದೆ. ಅದರ ಹೆಸರು ಡಿಹೈಡ್ರೊಜೆನ್ ಮೊನೊಕ್ಸೈಡ್. ಅದರ ಹಾನಿಗಳು ಅಪಾರ.
* ಇದರಿಂದ ಅತಿಯಾದ ಬೆವರು ಬರುತ್ತದೆ ಮತ್ತು ವಾಕರಿಕೆಯೂ ಹೆಚ್ಚು.
* ಆಸಿಡ್ ಮಳೆಯಲ್ಲಿ ಇದರ ಅಂಶವೇ ಹೆಚ್ಚು.
* ಇದರೊಂದಿಗೆ ಇತರ ಅಂಶಗಳು ಸೇರಿದರೆ ಅನೇಕ ರೋಗಗಳೂ ಬರಬಹುದು.
* ಅಕಸ್ಮಾತ್ತಾಗಿ ಉಸಿರಿನೊಳಗೆ ಸೇರಿದರೆ ಸಾವು ಗ್ಯಾರೆಂಟಿ.
* ಭೂಸವೆತಕ್ಕೂ ಇದು ಪ್ರಮುಖ ಕಾರಣ.
* ಆಟೊಮೊಬೈಲ್‌ನ ಕಾರ್ಯಕ್ಷಮತೆ ಕುಂದಲು ಇದೇ ಕಾರಣ.
* ಕ್ಯಾನ್ಸರ್ ಗಡ್ಡೆಗಳಲ್ಲೂ ಇದು ಇರುತ್ತದೆ.
ಈಗ ಹೇಳಿ. ಈ ರಸಾಯನಿಕವನ್ನು ನಿಷೇಸುವುದೋ ಬೇಡವೋ ಎಂದು ಆತ ೫೦ ಜನರನ್ನು ಪ್ರಶ್ನಿಸಿದಾಗ ೪೩ ಮಂದಿ ನಿಷೇಸುವುದಕ್ಕೆ ಸಹಮತ ಸೂಚಿಸುತ್ತಾರೆ. ೬ ಮಂದಿ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇನ್ನುಳಿದ ಒಬ್ಬರಿಗೆ ಮಾತ್ರ ಆ ಗುಟ್ಟು ಗೊತ್ತಿರುತ್ತದೆ.
ಅಷ್ಟಕ್ಕೂ ಆ ರಸಾಯನಿಕ ಯಾವುದು ಗೊತ್ತಾ? ನೀರು. ಈ ಪ್ರೊಜೆಕ್ಟ್‌ಗೇ ಆತ ಮೊದಲ ಬಹುಮಾನ ಪಡೆದಿದ್ದು. ಅದರ ಟೈಟಲ್ ‘ನಾವೆಷ್ಟು ಬೇಗ ಮೋಸ ಹೋಗುತ್ತೇವೆ?’ಎಂದು.
Sunday, 22 May 2011
Friday, 29 April 2011
ನನ್ನ ನಗು
ಕಾಡುವ ನೆನಪೀಗ ಬೆಂಕಿಯಾಗುವುದಿಲ್ಲ.
ಅವನ ಸನಿಹ ಇದ್ದರೂ ಆಯಿತು..ಇಲ್ಲದಿದ್ದರೂ ಸರಿ.
ಮಗುವಿನ ಸರಿಹೊತ್ತಿನ ನಗು ಕಾಣಿಸುವುದಿಲ್ಲ.
ದಡ ಮುಟ್ಟುವವರೆಗೆ ದನಿಯೆತ್ತದ ನಿಯಮ ನಾನೇ ಹೇರಿಕೊಂಡಿದ್ದು.
ಗೆಳತಿಯ ಆರೈಕೆ ಮನತಟ್ಟುವುದಿಲ್ಲ.
ನಗುವಿಗೆ ಗಟ್ಟಿ ಕಾರಣಗಳೇ ಬೇಕು.
ಕಳೆದುಕೊಂಡಿದ್ದೇನೆ..ನೆನಪುಗಳ
ಅರ್ಥವಾಗದ ಮಾತು-ಮೌನದ ಸುತ್ತ ಬೆಸೆವ ಬಂಧಗಳ
ಅದು ಸೃಜಿಸುವ ಭಾವಗಳ.
ನಗುತ್ತ, ನಗಿಸುತ್ತ ಹಗುರವಾಗುವ ನೋವುಗಳ.
ಕಳೆದುಹೋಗಿದ್ದೇನೆ..ಸತ್ಯಕ್ಕೆ
ಮುಖ ಕೊಡುವ ಧೈರ್ಯ ನನ್ನಲ್ಲಿಲ್ಲ.
ಮಧುರ ಭಾವ..ನನ್ನೀಗ ಕಂಗೆಡಿಸುವುದಿಲ್ಲ.

Wednesday, 20 April 2011
ಅಮ್ಮ ನೀ ದೇವರು
ಮೈಕ್ರೊಸಾಫ್ಟ್ ಧೋನಿ!
---------------
ಅಮ್ಮಾ...ನೀ ನನ್ನ ದೇವರು
ಮಕ್ಕಳಿಗೆ ಅಮ್ಮನ ಮಾತೆಂದರೆ ವೇದವಾಕ್ಯ. ಅದು ಸರಿಯೋ, ತಪ್ಪೋ, ಸುಳ್ಳೋ, ಸತ್ಯವೋ ಎಂಬ ಅರಿವು ಅವರಿಗೆ ಇರುವುದಿಲ್ಲ. ಒಟ್ಟಿನಲ್ಲಿ ಅಮ್ಮ ಏನಾದರೂ ಹೇಳಿದಳೆಂದರೆ, ಅದನ್ನು ಪಾಲಿಸಬೇಕು ಅಷ್ಟೇ.
ಕೆಲವು ಮಕ್ಕಳು ಇದಕ್ಕೆ ವ್ಯತಿರಿಕ್ತರಾಗಿರ‍್ತಾರೆ ಅದು ಬೇರೆ ವಿಚಾರ. ಆದರೆ, ಸಾಮಾನ್ಯವಾಗಿ ಅಮ್ಮ ಏನಾದರೂ ಹೇಳಿದಳೆಂದರೆ ಅದು ಪರಮ ಸತ್ಯವೆಂದೇ ಮಕ್ಕಳು ತಿಳಿಯುತ್ತಾರೆ. ಅಲ್ವೇ?
ಅಮ್ಮನ ಮಾತನ್ನು ಮೀರಲಾಗದೇ ಮಕ್ಕಳು ವರ್ತಿಸುವ ಬಗ್ಗೆ ಇಲ್ಲೆರಡು ಸನ್ನಿವೇಶಗಳಿವೆ. ಅದನ್ನು ಓದಿದ ಬಳಿಕ ಮಕ್ಕಳಿಗೆ ಹೇಗೆ ವಿಷಯ ಮನದಟ್ಟು ಮಾಡಿಕೊಡಬೇಕೆಂದು ನೀವೇ ಯೋಚಿಸಿ.
ಘಟನೆ ಒಂದು
ಒಮ್ಮೆ ಐದು ವರ್ಷದ ಪುಟ್ಟ ಮಗು ಶ್ರೇಯಾಳಿಗೆ ಯಾವುದೋ ಆರೋಗ್ಯ ಸಮಸ್ಯೆ ಉಂಟಾಗಿತ್ತು. ವೈದ್ಯರ ಶಿಫಾರಸು ಮೇರೆಗೆ ಸಿಟಿ ಸ್ಕ್ಯಾನ್ ಮಾಡಿಸಬೇಕೆಂದು ಅವಳ ಅಮ್ಮ ಕರೆದುಕೊಂಡು ಹೋಗಿದ್ದರು. ಸ್ಕ್ಯಾನ್ ಮಾಡಲು ವೈದ್ಯರು ಬಂದರು. ಆದರೆ, ಶ್ರೇಯಾ ಇನ್ನೂ ಏನೇನೋ ಆಟವಾಡುವ ವಿಚಾರದಲ್ಲೇ ಇದ್ದಳು.
ಆಗ ಅವಳ ಅಮ್ಮ ‘ಸುಮ್ಮನಿರು. ಸ್ಕ್ಯಾನ್ ಮಾಡಿಸುವಾಗ ಏನೆಂದರೆ ಏನೂ ಚಲನೆ ಮಾಡಬಾರದು. ಸುಮ್ಮನೆ ಮಲಗಿಕೊ’ಎಂದರು. ಅವಳಿಗೆ ಹೆಚ್ಚು ಎಚ್ಚರ ಮೂಡಿಸಬೇಕೆಂದು ಪದೇ ಪದೇ ‘ಹಾಗೇಯೇ ಮಲಗು. ತಲೆ ಅಲ್ಲಾಡಿಸಬೇಡ. ಬೆರಳುಗಳನ್ನು ಸಹ ಅಲ್ಲಾಡಿಸಬೇಡ’ಎಂದು ಹೇಳುತ್ತಾ ಉಳಿದರು.
ಅಲ್ಲಿ ಸೈಲೆನ್ಸ್ ಇತ್ತು ಎಷ್ಟೆಂದರೆ, ಉಸಿರಾಡಿಸುವುದೂ ಸಹ ಕೇಳುವಷ್ಟು. ಮಶಿನ್ ಸದ್ದು ಬಿಟ್ಟು ಬೇರೆ ಯಾವ ಸದ್ದೂ ಅಲ್ಲಿರಲಿಲ್ಲ. ಆಗ ಕೆಲವು ಸೆಕೆಂಡ್‌ಗಳ ಕಾಲ ಸುಮ್ಮನಿದ್ದ ಶ್ರೇಯಾ, ಪಿಸುಮಾತಿನಲ್ಲಿ ಕೇಳ್ತಾಳೆ‘ಅಮ್ಮಾ ನಾನು ಉಸಿರಾಡಿಸಬಹುದಾ?’
ಘಟನೆ ಎರಡು
ಏಳು ವರ್ಷದ ಸೌಮ್ಯಾ ಯಾವುದೋ ಪುಸ್ತಕವನ್ನು ಓದುತ್ತ ಕೂತಿದ್ದಳು. ಅವಳ ಅಮ್ಮ ಏನೋ ಕೆಲಸದಲ್ಲಿ ತಲ್ಲೀನರಾಗಿದ್ದರು. ಪುಸ್ತಕ ಓದುತ್ತಿದ್ದ ಸೌಮ್ಯಾಳಿಗೆ ಯಾವುದೋ ಸಮಸ್ಯೆ ಬಂತು. ಸರಿ ಅಮ್ಮನಲ್ಲಿಗೆ ಹೋಗಿ ‘ಅಮ್ಮಾ ಎಂ.ಎಸ್ ಫುಲ್‌ಫಾರ್ಮ್ ಏನು?’ಎಂದು ಕೇಳಿದಳು.
‘ಎಂ.ಎಸ್ಸಾ? ಮೈಕ್ರೊಸಾಫ್ಟ್’ಎಂದು ಅಮ್ಮ ಉತ್ತರ ನೀಡುತ್ತಾರೆ. ಮತ್ತೆ ಹಿಂತಿರುಗಿ ತನ್ನ ಜಾಗಕ್ಕೆ ಹೋಗಿ ಓದಲು ಕುಳಿತ ಸೌಮ್ಯಾ ಜೋರಾಗಿ ಹೇಳಿಕೊಳ್ಳುತ್ತಾಳೆ‘ಮೈಕ್ರೊಸಾಫ್ಟ್ ಧೋನಿ ಇಸ್ ಅ ಫೇಮಸ್ ಕ್ರಿಕೆಟರ್.....’

ದೇವರ ನಿದ್ದೆ
ದೇವರ ನಿದ್ದೆ
ಚೆಂದ, ಮಧುರ ಹೂಗಳು ನನಗಿಲ್ಲಿ
ಭಾರವಾಗಿ ಕಾಡುತ್ತಿವೆ
ಹೂ ಮಾರುವವನ ಕರ್ಕಶ ದನಿಗೆ
ಹಾಲುಗಲ್ಲದ ಕಂದ ಬೆಚ್ಚಿ ಅಳುವಾಗ
ಇಂಡಿಯಾದ ವಿಜಯವೂ ನನಗೆ ಅಪ್ರಸ್ತುತ
ಅಬ್ಬರದ ದೇಶಪ್ರೇಮಕ್ಕೆ, ಮಧ್ಯರಾತ್ರಿಯ ಹರುಷಕ್ಕೆ
ತತ್ತರಿಸುವ ಹಸುಳೆಯ ನಿದ್ದೆಗಣ್ಣಿನ
ಆಕ್ರಂದನ ನನ್ನೆದೆಯಲ್ಲಿ
ಕೂಸಿಗೆ ನೆಮ್ಮದಿಯ ನಿದ್ದೆ
ನೀಡಲೂ ನನ್ನಿಂದ ಸಾಧ್ಯವಿಲ್ಲವೆಂಬ
ಹತಾಶೆ ಕಾಡುವಾಗ ನಶೆಯೇರಿದ ನಗರಕ್ಕೆ
ಹಿಡಿಶಾಪ ಹಾಕುತ್ತೇನೆ
ಬಯಲೇ ಸಿಗದ ಯಾನಕ್ಕೂ
ಲಯವೇ ಇಲ್ಲದ ಬದುಕಿಗೂ
ಸಂಬಂಧ ಕಲ್ಪಿಸಿ ನರಳುತ್ತೇನೆ
ರಾತ್ರಿ ರಾತ್ರಿ

Saturday, 22 January 2011
ಅವಳು ರಾಧೆ...
ಮೀಸೆ ಮೂಡುವ ಮುನ್ನವೇ
ಮನಕದ್ದ ಚೋರ ಹತ್ತಾರು ಗೋಪಿಕೆಯರ
ನಲ್ಲ ಎಂದರೂ ಅಚಲ ವಿಶ್ವಾಸ ಅವಳದ್ದು.
ಹದಿನಾರು ಸಾವಿರ ಹೆಂಡಿರ
ಸೆರಗಿನಡಿ ಬೆಚ್ಚಗಿದ್ದ ಆ ಜೀವವೂ
ಈ ವಿರಹಕ್ಕೆ, ಕಾಯುವಿಕೆಗೆ ಸೋತಿತ್ತು.
ಅವನ ಪಾದದ ಮೇಲೆ ಅವಳ ಕಂಬನಿ
ಅವನೆದೆಯಲ್ಲಿ ಅವಳ ಚಿತ್ರ
ಅವಳ ಬದುಕಲ್ಲಿ ಅವನಿಲ್ಲ ಎಂದವರು ಯಾರು?
ಅಷ್ಟಕ್ಕೂಅವಳಿಗೆ ಅವನು ಬೇಕಿಲ್ಲ
ನೆನಪೊಂದೇ ಸಾಕು
ಜೀವನವಿಡೀ ಬೇಯಲು.
ಮನಕದ್ದ ಚೋರ ಹತ್ತಾರು ಗೋಪಿಕೆಯರ
ನಲ್ಲ ಎಂದರೂ ಅಚಲ ವಿಶ್ವಾಸ ಅವಳದ್ದು.
ಹದಿನಾರು ಸಾವಿರ ಹೆಂಡಿರ
ಸೆರಗಿನಡಿ ಬೆಚ್ಚಗಿದ್ದ ಆ ಜೀವವೂ
ಈ ವಿರಹಕ್ಕೆ, ಕಾಯುವಿಕೆಗೆ ಸೋತಿತ್ತು.
ಅವನ ಪಾದದ ಮೇಲೆ ಅವಳ ಕಂಬನಿ
ಅವನೆದೆಯಲ್ಲಿ ಅವಳ ಚಿತ್ರ
ಅವಳ ಬದುಕಲ್ಲಿ ಅವನಿಲ್ಲ ಎಂದವರು ಯಾರು?
ಅಷ್ಟಕ್ಕೂಅವಳಿಗೆ ಅವನು ಬೇಕಿಲ್ಲ
ನೆನಪೊಂದೇ ಸಾಕು
ಜೀವನವಿಡೀ ಬೇಯಲು.
Wednesday, 19 January 2011
ನಾನು ಸೀತೆಯಲ್ಲ
ನನ್ನ ತಿರಸ್ಕಾರ ಇರುವುದು ನಿನ್ನ ಮೇಲಲ್ಲ
ಖುದ್ದು ನನ್ನ ಮೇಲೆಯೂ ಅಲ್ಲ
ಸೊಕ್ಕಿ ನಿಂತ ನನ್ನ ದೇಹದ ಮೇಲೆ
ಅದರೆಡೆಗಿನ ನಿನ್ನ ಮೋಹದ ಮೇಲೆ
ನಿನ್ನ ಹೆಜ್ಜೆಯ ಜಾಡನ್ನು ಅನುಸರಿಸಿ
ನನ್ನ ಬಯಕೆಗಳು ಬಸವಳಿದಿವೆ
ನಾನಲ್ಲ, ತಪ್ಪು ತಿಳಿಯಬೇಡ
ನಿನ್ನ ಪಾದದಡಿಯ ಧೂಳು ಆಗಲು
ನಾನು ಸೀತೆಯಲ್ಲ, ನೀನು ರಾಮನೂ ಅಲ್ಲ
ಜಗದ ಕಣ್ಣಿಗೆ ಅಮರರಾಗುವುದು ನನಗೆ ಬೇಕಿಲ್ಲ
ಖುದ್ದು ನನ್ನ ಮೇಲೆಯೂ ಅಲ್ಲ
ಸೊಕ್ಕಿ ನಿಂತ ನನ್ನ ದೇಹದ ಮೇಲೆ
ಅದರೆಡೆಗಿನ ನಿನ್ನ ಮೋಹದ ಮೇಲೆ
ನಿನ್ನ ಹೆಜ್ಜೆಯ ಜಾಡನ್ನು ಅನುಸರಿಸಿ
ನನ್ನ ಬಯಕೆಗಳು ಬಸವಳಿದಿವೆ
ನಾನಲ್ಲ, ತಪ್ಪು ತಿಳಿಯಬೇಡ
ನಿನ್ನ ಪಾದದಡಿಯ ಧೂಳು ಆಗಲು
ನಾನು ಸೀತೆಯಲ್ಲ, ನೀನು ರಾಮನೂ ಅಲ್ಲ
ಜಗದ ಕಣ್ಣಿಗೆ ಅಮರರಾಗುವುದು ನನಗೆ ಬೇಕಿಲ್ಲ
Tuesday, 18 January 2011
ಈ ಕ್ಷಣ...
ಯಾರಯಾರನ್ನೋ ಕಾಡಿ ಬೇಡಿ ತಂದ ಕನಸುಗಳು
ಬಹುಕಾಲ ಉಳಿಯುವುದಿಲ್ಲವೆಂಬ ಸತ್ಯ
ನನಗಾಗ ಗೊತ್ತಿರಲಿಲ್ಲ
ಈಗ ಜಗವೇ ಕತ್ತಲಾಗಿದೆ
ತಡಕಾಡಿದರೆ ಪಕ್ಕದಲ್ಯಾರೂ ಇಲ್ಲ.
ಪ್ರೀತಿಗೆ ದೇಹದ ಹಂಗಿಲ್ಲ
ಎಂದವನ ಕೇಳಬೇಕಿದೆ
ನಿನ್ನ ಇಡೀ ಅಸ್ತಿತ್ವವನ್ನೇ ಆರಾಧಿಸುವಾಗ
ದೇಹವೊಂದನ್ನು ದೂರ ಇಡಲೇ ಎಂದು.
ನನ್ನ ಇಬ್ಬಗೆ ನೋಡಿ ದೂರದ ಕೃಷ್ಣ ಓಡಿಬರುವನೇ?
ಆ ಶಿಖರದಲ್ಲಿ ಸಂಧಿಸೋಣ ಎಂದವನ ಪತ್ತೆಯಿಲ್ಲ
ಬಹಳ ಕಾಲವಾಯಿತು
ತುದಿ ಏರಬಲ್ಲೆ..ಗುರಿ ತಲುಪಬಲ್ಲೆ
ಅವನಿಗಾಗಿ ಏನೂ ಮಾಡಬಲ್ಲೆ
ಎಂದವನಿಗೆ ಗೊತ್ತಿತ್ತಾ?
ಆಸೆಯೂ ಇರಲಿ, ದುಃಖವೂ ಬರಲಿ
ಈ ಹಾದಿಯಲ್ಲಿ ಬೇರೆ ಯಾರೂ ಬರದಿರಲಿ
ಹತ್ತಾರು ಜನ್ಮ ಬೇಗೆಯಲ್ಲೇ ಇರಬಲ್ಲೆ
ಕ್ಷಣ ಕಾಲದ ಸುಖವೇ ಸಾಕು ಬದುಕಿಗೆ
ಸುಖ ಕ್ಷಣಿಕ ಎಂದವರು ಯಾರು ?
ಬಹುಕಾಲ ಉಳಿಯುವುದಿಲ್ಲವೆಂಬ ಸತ್ಯ
ನನಗಾಗ ಗೊತ್ತಿರಲಿಲ್ಲ
ಈಗ ಜಗವೇ ಕತ್ತಲಾಗಿದೆ
ತಡಕಾಡಿದರೆ ಪಕ್ಕದಲ್ಯಾರೂ ಇಲ್ಲ.
ಪ್ರೀತಿಗೆ ದೇಹದ ಹಂಗಿಲ್ಲ
ಎಂದವನ ಕೇಳಬೇಕಿದೆ
ನಿನ್ನ ಇಡೀ ಅಸ್ತಿತ್ವವನ್ನೇ ಆರಾಧಿಸುವಾಗ
ದೇಹವೊಂದನ್ನು ದೂರ ಇಡಲೇ ಎಂದು.
ನನ್ನ ಇಬ್ಬಗೆ ನೋಡಿ ದೂರದ ಕೃಷ್ಣ ಓಡಿಬರುವನೇ?
ಆ ಶಿಖರದಲ್ಲಿ ಸಂಧಿಸೋಣ ಎಂದವನ ಪತ್ತೆಯಿಲ್ಲ
ಬಹಳ ಕಾಲವಾಯಿತು
ತುದಿ ಏರಬಲ್ಲೆ..ಗುರಿ ತಲುಪಬಲ್ಲೆ
ಅವನಿಗಾಗಿ ಏನೂ ಮಾಡಬಲ್ಲೆ
ಎಂದವನಿಗೆ ಗೊತ್ತಿತ್ತಾ?
ಆಸೆಯೂ ಇರಲಿ, ದುಃಖವೂ ಬರಲಿ
ಈ ಹಾದಿಯಲ್ಲಿ ಬೇರೆ ಯಾರೂ ಬರದಿರಲಿ
ಹತ್ತಾರು ಜನ್ಮ ಬೇಗೆಯಲ್ಲೇ ಇರಬಲ್ಲೆ
ಕ್ಷಣ ಕಾಲದ ಸುಖವೇ ಸಾಕು ಬದುಕಿಗೆ
ಸುಖ ಕ್ಷಣಿಕ ಎಂದವರು ಯಾರು ?
Subscribe to:
Posts (Atom)